ಕುಷ್ಟಗಿ, ಡಿಸೆಂಬರ್ 14: ಯಡಿಯೂರಪ್ಪ ಅವರ ಬುಟ್ಟಿಯಲ್ಲಿ ಹಾವೇ ಇಲ್ಲ. ಆದರೂ ಬಿಡ್ತೀನಿ ಅಂತ ಹೆದರಿಸ್ತಾರೆ. ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡುವುದಕ್ಕೆ ಅವರಿಗೆ ವಿಷಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದರು.ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಯುವಾಗ ಇನ್ನು ಹತ್ತು ದಿನದೊಳಗಾಗಿ ಹಾವು ಬಿಡ್ತೀವಿ ಅಂತ ಹೇಳಿದರು. ಹಾವೇ ಇಲ್ಲದ ಬುಟ್ಟಿ ತೋರಿಸಿ, ಬಿಡ್ತೀನಿ ಬಿಡ್ತೀನಿ ಅಂತಿದ್ದಾರೆ. ಯಡಿಯೂರಪ್ಪ ಮೇಲೆ ನಲವತ್ತಾರು ಎಫ್ ಐಆರ್ ಗಳಿವೆ. ಮೊದಲು ಅವುಗಳಿಂದ ಆಚೆ ಬರಲಿ ಎಂದರು.ಇನ್ನು ಇಂದಿರಾಗಾಂಧಿ ಸಹ ಜೈಲಿಗೆ ಹೋಗಿದ್ದವರಲ್ಲವಾ ಎಂಬ ಪ್ರಶ್ನೆ ತೆಗೆದುಕೊಂಡು ಉತ್ತರಿಸಿದ ಅವರು, ಯಡಿಯೂರಪ್ಪನ ಥರ ಲಂಚ ತೆಗೆದುಕೊಂಡು ಇಂದಿರಾಗಾಂಧಿ ಅವರು ಜೈಲಿಗೆ ಹೋಗಿದ್ದಲ್ಲ. ತುರ್ತು ಪರಿಸ್ಥಿತಿಯ ಕಾರಣಕ್ಕೆ ಜೈಲಿಗೆ ಹೋಗಬೇಕಾಯಿತು ಎಂದು ಸಮರ್ಥನೆಯನ್ನು ನೀಡಿದರು.ವೀರಶೈವ- ಲಿಂಗಾಯತರನ್ನು ಒಡೆಯುವುದಕ್ಕೆ ಅಂತಲೇ ಮಂತ್ರಿಗಳನ್ನು ನೇಮಕ ಮಾಡಿದ್ದೀರಂತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಅಂಥ ಯಾವ ಕೆಲಸವನ್ನೂ ಮಾಡಿಲ್ಲ ಎಂದರು.
BJP Karnataka state president BS Yeddyurappa threatening without any proof against Congress led sate government, says chief minister Siddaramaiah in Kushtagi, Koppal district on Thursday.